के बारे में

ಕರ್ನಾಟಕ ಸರ್ಕಾರದ ಮುಖ್ಯಜಾಲತಾಣಕ್ಕೆ ಭೇಟಿನೀಡುತ್ತಿರುವುದಕ್ಕೆ ಧನ್ಯವಾದಗಳು.

ಕರ್ನಾಟಕವನ್ನು ಸಮಗ್ರವಾಗಿ ಬಿಂಬಿಸುವ ಅವಶ್ಯಕತೆಯನ್ನು ಮನಗಂಡು ಕರ್ನಾಟಕ ಸರ್ಕಾರದ ಅಧಿಕೃತ ಮುಖ್ಯಜಾಲತಾಣವನ್ನು ಸೃಜಿಸಲಾಗಿದೆ. ಈ ಜಾಲತಾಣವು, ನಾಡಿನ ಇತಿಹಾಸ, ಭಾಷೆಯ ಇತಿಹಾಸ, ಆಚರಣೆಗಳು, ಸಂಸ್ಕೃತಿ-ಪರಂಪರೆ, ರಾಜ್ಯ ನೀಡುವ ಗೌರವಗಳು, ರಾಜ್ಯಕ್ಕೆ ಸಂದ ಗೌರವಗಳು, ಜಿಲ್ಲೆಗಳ ಸಂಕ್ಷಿಪ್ತ ವಿವರ, ಜನಪ್ರತಿನಿಧಿಗಳ ಮಾಹಿತಿ, ಗೌರವಾನ್ವಿತ ರಾಜ್ಯಪಾಲರಿಂದ ಒಳಗೊಂಡು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳವರೆಗಿನ ಸಂಪೂರ್ಣ ಸಂಪರ್ಕ ಕೈಪಿಡಿ, ರಾಜ್ಯದ ದೃಷ್ಟಿಯಿಂದ ಇಂದಿನ ಮಹತ್ವವನ್ನು ಸಾರುವ ಚಿತ್ರಸಹಿತ ಮಾಹಿತಿ, ರಾಷ್ಟ್ರಮಟ್ಟದಲ್ಲಿ ರಾಜ್ಯದ ಸ್ಥಾನಮಾನದ ಹೋಲಿಕೆಯ ಅಂಶಗಳು, ಸುಸ್ಥಿರ ಅಭಿವೃದ್ಧಿ ಗುರಿಗಳು, ಪ್ರವಾಸಿ ತಾಣಗಳು, ಸೇರಿದಂತೆ ಮಹತ್ವದ ಮಾಹಿತಿಯನ್ನು ಒಳಗೊಂಡಿದೆ.

ಹೊಣೆಗಾರಿಕೆಗಳು
ಮಹತ್ವದ ಉದ್ದೇಶದಿಂದ ಪ್ರಕಟವಾಗುತ್ತಿರುವ ಈ ಜಾಲತಾಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರ್ಥಿಕ ಮತ್ತು ಸಾಂ‍ಖ್ಯಿಕ ಇಲಾಖೆ ಹಾಗೂ ಇ-ಆಡಳಿತ ಕೇಂದ್ರ ಮತ್ತು ಸಾರ್ವಜನಿಕರು ಪಾಲುದಾರರಾಗಿರುತ್ತಾರೆ (ಸ್ಟೇಕ್‌ಹೋಲ್ಡರ್ಸ್).

ಇಲಾಖೆಗಳು ಮಾಹಿತಿಯನ್ನು ಜಾಲತಾಣಕ್ಕೆ ಅಪ್ಲೋಡ್‌ ಮಾಡುವಾಗ ಮಾಹಿತಿ ನಿರ್ವಹಣೆ ಮತ್ತು ಅನುಮೋದನಾ ನೀತಿ(CMAP)ಯನ್ನು ಅನುಸರಿಸುತ್ತವೆ. ಇಲ್ಲಿ ಕಂಟೇಂ